ಶ್ರೀ ಸ.ಸ.ರಂಗರಾವ ಮಹಾರಾಜರು 1942ರಲ್ಲಿ ಕೂಪಕಡ್ಡಿ ಗ್ರಾಮಕ್ಕೆ ಪಾದಾರ್ಪಣೆ ಮಾಡಿ ಭಕ್ತಿ ಪ್ರಸಾರ ಕೈಗೊಂಡು, 1946 ರಲ್ಲಿ ತಮ್ಮ ಗುರುಗಳಾದ ಶ್ರೀ ಸ.ಸ.ರಾಮಚಂದ್ರರಾವ ಮಹಾರಾಜರ ದಿವ್ಯ ಅಸ್ತಿ ಹಾಗೂ ವಿಠ್ಠಲ ರುಕ್ಮಿಣಿ ಮೂರ್ತಿಗಳನ್ನು ವೇದ ಘೋಷಗಳೊಂದಿಗೆ ಸ್ಥಾಪನೆ. ಭಕ್ತ ಸಮುದಾಯದ ಬೆಳವಣಿಗೆ ಜೊತೆಗೆ ಮಠದ ವಿಸ್ತಾರ ಹಾಗೂ 1977ರಲ್ಲಿ ಶ್ರೀ ಸ.ಸ.ರಂಗರಾವ ಮಹಾರಾಜರ ದಿವ್ಯ ವೃಂದಾವನ ಸ್ಥಾಪನೆ ಭಕ್ತ ಮಂಡಳಿಯಿಂದ ಆಯಿತು. ಶ್ರೀ ಕ್ಷೇತ್ರ ಇಂಚಗೇರಿಯಲ್ಲಿ ಶ್ರೀ ಭಾವೂಸಾಹೇಬ ಮಹಾರಾಜರು ಹಾಕಿ ಕೊಟ್ಟ ಪದ್ದತಿಯಂತೆ ಹಾಗೂ ಶ್ರೀ ಸ.ಸ.ರಂಗರಾವ ಮಹಾರಾಜರು ತೋರಿಸಿಕೊಟ್ಟ ಪದ್ದತಿಯಂತೆ ಇಲ್ಲಿಯವರೆಗೂ ಚಾಚೂ ತಪ್ಪದೇ ನಿರಂತರವಾಗಿ ಭಕ್ತಿ ಕಾರ್ಯ ಮುಂದುವರಿದಿದೆ.
ಈ ಕ್ಷೇತ್ರವು ವಿಜಯಪುರದಿಂದ ಹುಬ್ಬಳ್ಳಿ ಮಾರ್ಗ, ರಾಷ್ಟ್ರೀಯ ಹೆದ್ದಾರಿ 218ರ ಮೂಲಕ, 36 ಕಿ.ಮೀ. ಅಂತರದಲ್ಲಿ, ಬಲಗಡೆಗೆ ಮಹಾದ್ವಾರ ಇದ್ದು, ಅಲ್ಲಿಂದ 3 ಕಿ.ಮೀ. ಅಂತರದಲ್ಲಿ ಶ್ರೀ ಮಠವು ಇರುತ್ತದೆ.